• Dr Narayana Pradeep article

  ಜಾಗತಿಕ ಅಲರ್ಜಿ ಸಪ್ತಾಹ

  ಭಾರತದಲ್ಲಿ ಲಕ್ಷಾಂತರ ಮಂದಿ ಅಲರ್ಜಿಕ್ ರಿನಿಟಿಸ್ ನಿಂದ ಬಳಲುತ್ತಿದ್ದಾರೆ : ಆದರೂ ಇದೊಂದು ಉಪೇಕ್ಷಿತ ಅಸ್ವಸ್ಥತೆಯಾಗಿದೆ

   

  • ಜನಸಂಖ್ಯೆಯಲ್ಲಿ ಸಮಾರು ಆರು ಜನರಲ್ಲಿ ಒಬ್ಬರು ಅಲರ್ಜಿಕ್ ರಿನಿಟಿಸ್ ನಿಂದ ಬಳಲುತ್ತಿದ್ದಾರೆ.
  • ಶೇಕಡ ಎಂಬತ್ತರಷ್ಟು ಸಂದರ್ಭಗಳಲ್ಲಿ ಇದು ಇಪ್ಪತ್ತಕ್ಕಿಂತ ಕಿರಿಯ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುತ್ತದೆ.
  • ಶೇಕಡ ನಲವತ್ತೈದರಷ್ಟು ಸಂದರ್ಭಗಳಲ್ಲಿ ಧೂಳಿನ ಕ್ರಿಮಿಗಳು ಸಾಮಾನ್ಯ ಅಲರ್ಜಿ ಕಾರಕಗಳಾಗಿವೆ.
  • ಅಲರ್ಜಿಕ್ ರಿನಿಟಿಸ್ ನಿಂದ ಬಳಲುವವರಿಗೆ ವಸಂತ ಋತು ಅತ್ಯಂತ ಕಠಿಣತಮ ಋತು

   

    ಭಾರತದ ಜನಸಂಖ್ಯೆಯಲ್ಲಿ ಸುಮಾರು ಶೇಕಡ ಇಪ್ಪತ್ತರಿಂದ ಮುವ್ವತ್ತರಷ್ಟು ಮಂದಿ ಒಂದಿಲ್ಲೊಂದು ಅಲರ್ಜಿಕ್ ರಿನಿಟಿಸ್ ನಿಂದ ನರಳುತ್ತಿರುವ ವರದಿಗಳು ಇವೆ. ದೇಶದಲ್ಲಿ ಹೆಚ್ಚುತ್ತಿರುವ ಅಲರ್ಜಿಕ್ ಅಸ್ವಸ್ಥತೆಯ ಹಿಡಿತ ಕಳೆದೆರಡು ದಶಕಗಳಲ್ಲಿ ಹೆಚ್ಚಾಗಿ ಗುರುತಿಸಲಾಗಿದೆ. ಬಹುಪಾಲು ಇಬ್ಬರಲ್ಲಿ ಒಬ್ಬರು ಯಾವುದಾದರೂ ಸಾಮಾನ್ಯ ಪರಿಸರ ಸಂಬಂಧಿ ಅಂಶಗಳಿಂದ ಬಾಧಿತರಾಗಿದ್ದಾರೆ. ಭಾರತ ಉಪಖಂಡದಲ್ಲಿ ಎಲ್ಲಾ ಬಗೆಯ ಅಲರ್ಜಿಗಳಿಂದ ಬಾಧಿತರಾಗಿರುವ ಸುಮಾರು  ನೂರು ದಶಲಕ್ಷ ಮಂದಿಯಲ್ಲಿ ಶೇಕಡ  ಐವತ್ತೈದರಷ್ಟು ಜನ ಅಲರ್ಜಿಕ್ ರಿನಿಟಿಸ್ ನಿಂದಲೇ ಬಳಲುತ್ತಿದ್ದಾರೆ ಎಂಬುದು  ಗಮನಾರ್ಹ ಸಂಗತಿಯಾಗಿದೆ. ಶೇಕಡ ನಲವತ್ತೈದರಷ್ಟು ಸಂದರ್ಭಗಳಲ್ಲಿ ಧೂಳಿನ ಕ್ರಿಮಿಗಳೇ ಅಲರ್ಜಿಗೆ ಕಾರಣವಾಗಿವೆ. ಅಲರ್ಜಿಕ್ ರಿನಿಟಿಸ್ ನಿಂದ ದಯನೀಯವಾಗಿ ಬಳಲುವವರಿಗೆ ವಸಂತ ಋತು ಅತ್ಯಂತ ಕಠಿಣತಮ ಋತುವಾಗಿದೆ.

   

    ಅಲರ್ಜಿಯು ಚರ್ಮ, ಕಣ್ಣು ಮತ್ತು ಮೂಗು ಮುಂತಾದ ದೇಹದ ವಿವಿಧ ಭಾಗಗಳ ಮೇಲೆ ತನ್ನ ಪರಿಣಾಮವನ್ನು ಉಂಟುಮಾಡಬಹುದು. ಮೂಗಿನ ಮೇಲೆ ಪರಿಣಾಮ ಬೀರಿದರೆ, ಸೀನುವುದುಮೂಗಿನ ಕೆರೆತ. ಮೂಗು ಸೋರುವ ಅಥವ ಕಟ್ಟಿಕೊಳ್ಳುವ ಮತ್ತು ಕಣ್ಣಿನಿಂದ ನೀರು ಸೋರುವ ಕಿರಿಕಿರಿಯ ಲಕ್ಷಣಗಳು ಉಂಟಾಗುತ್ತವೆ. ಇವುಗಳನ್ನು ಅಲರ್ಜಿಕ್ ರಿನಿಟಿಸ್ ಲಕ್ಷಣಗಳು ಎಂದು ಕರೆಯಲಾಗುತ್ತದೆ. ಅಲರ್ಜಿಕ್ ರಿನಿಟಿಸ್ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ  ಬೇರೆಯಾಗಿರಬಹುದು. ‘ರಿನಿಟಿಸ್ಕೇವಲ ನಾಸಿಕಕ್ಕೆ ಸಂಬಂಧಿಸಿದ ಲಕ್ಷಣಗಳನ್ನೇ ಸೂಚಿಸಿದರೂ ಎಷ್ಟೋ ರೋಗಿಗಳು ಅವರ ಕಣ್ಣು, ಗಂಟಲು ಮತ್ತು ಕಿವಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನೂ ಅನುಭವಿಸಬಹುದು. ಇದಕ್ಕೆ ಹೆಚ್ಚುವರಿಯಾಗಿ ನಿದ್ರಾಭಂಗವಾಗಬಹುದು. ಆದುದರಿಂದ ಇಡಿಯಾಗಿ ಎಲ್ಲಾ ಲಕ್ಷಣಗಳನ್ನೂ ಗಮನಿಸುವುದು ಹೆಚ್ಚು ಸಹಾಯಕವಾಗುತ್ತದೆ.

    ಇಂಡಿಯಾನ ಆಸ್ಪತ್ರೆಯ ಅಲರ್ಜಿ ಅಸ್ತಮ ತಜ್ಞರೂ ಸಮಾಲೋಚಕರೂ ಆದ ಡಾ. ನಾರಾಯಣ ಪ್ರದೀಪ್ ಅವರು  “ ಅಲರ್ಜಿಕ್ ರಿನಿಟಿಸ್ (AR) ಉಸಿರಾಟವನ್ನು ಕೆರಳಿಸುವ ದೀರ್ಘಕಾಲೀನ ಖಾಯಿಲೆಯಾಗಿದ್ದು ಜಗತ್ತಿನ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರನ್ನು ಬಾಧಿಸುತ್ತಿದೆ. ಭಾರತದಲ್ಲಿಲಕ್ಷಾಂತರ ಜನರು ಅಲರ್ಜಿಕ್ ರಿನಿಟಿಸ್ ನಿಂದ ಬಳಲುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ಅವರಲ್ಲಿ ಅದನ್ನು ಒಪ್ಪುವವರಾಗಲೀ ಅಥವ ಸರಿಯಾದ ಔಷದೋಪಚಾರಗಳನ್ನು ಪಡೆಯುವವರಾಗಲಿ ತುಂಬ ಕಡಿಮೆ. ಅವರು ತಾವೇ ಶೀತ ನಿರೋಧಕ ಗುಳಿಗೆಗಳು ಮುಂತಾದ ಯಾವುದೇ ಪರಿಹಾರ ನೀಡದ ಸ್ವಯಂ ಔಷದೋಪಚಾರಗಳನ್ನು ಮಾಡಿಕೊಳ್ಳುತ್ತಾರೆ. ನಿಜವೆಂದರೆ  ಔಷಧಿಗಳ ಅಡ್ಡ ಪರಿಣಾಮ  ರೋಗಿಯ ಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತವೆಎನ್ನುತ್ತಾರೆಮತ್ತೂ ಮುಂದುವರಿಸಿವಸಂತ ಋತುವಿನ ಪುಷ್ಪಧೂಳಿನ ಪರಿಣಾಮವಾಗಿ ಕೆಂಪಾದ, ಕಿರಿಕಿರಿಯ, ನೀರು ಸೋರುವ ಕಣ್ಣುಗಳೊಂದಿಗೆ ಅವರು  ದಯನೀಯವಾಗಿ ಸೀನುವಂತೆ ಮಾಡುತ್ತದೆ.” ಎನ್ನುತ್ತಾರೆ.

   

    ಡಾ. ನಾರಾಯಣ ಪ್ರದೀಪ್ಅಲರ್ಜಿಕ್ ರಿನಿಟಿಸ್   ಹೆಚ್ಚಳ ಕೇವಲ ಮಕ್ಕಳಲ್ಲಿ ಮಾತ್ರವಲ್ಲ ದೊಡ್ಡವರಲ್ಲೂ ಇದೆ. ಆದರೆ ಅತಿ ಹೆಚ್ಚು ಸಂಭಾವ್ಯತೆ ಯೌವನದ ಆರಂಭಿಕ ವಯಸ್ಸಿನಲ್ಲಿದೆ. ಅಲರ್ಜಿಕ್ ರಿನಿಟಿಸ್ ಶೇಕಡ ಎಂಬತ್ತರಷ್ಟು  ಜನಗಳಲ್ಲಿ ಅವರ ಇಪ್ಪತ್ತನೆಯ ವಯಸ್ಸಿಗೆ ಮೊದಲೇ ಕಾಣಿಸಿಕೊಂಡು ಯೌವನದಲ್ಲಿ ತೀವ್ರವಾಗುತ್ತದೆ. ಸ್ವಾರಸ್ಯವೆಂದರೆ ಇದಕ್ಕೆ ಶಿಶುತನದಲ್ಲಿ ಪುರುಷ ಲಿಂಗಿಗಳು ಹೆಚ್ಚು ಗುರಿ, ಆದರೆ ಯೌವನಸ್ಥರಲ್ಲಿ ಇದು ಸಮಾನವಾಗಿರುತ್ತದೆ. ವಯಸ್ಸಾದಂತೆ ಅಲರ್ಜಿಕ್ ರಿನಿಟಿಸ್ ಪರಿಣಾಮ ಕಡಿಮೆಯಾಗುತ್ತದೆಯಾದರೂ ಹಿರಿಯ ವಯಸ್ಸಿನವರಲ್ಲಿಯೂ ಇದರ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆಎನ್ನುತ್ತಾರೆ.

   

    ಅಲರ್ಜಿಕ್ ರಿನಿಟಿಸ್ ಗೂ ಇತರ ಉಸಿರಾಟದ ಖಾಯಿಲೆಗಳಿಗೂ ಸಂಬಂಧವಿದೆ. ಇದು ಜೀವಕ್ಕೆ ಮಾರಕವಾದುದಲ್ಲವಾದರೂ ಅಸ್ತವ್ಯಸ್ತಗೊಳಿಸುತ್ತದೆ. ನಿದ್ರಾಭಂಗ, ಶಾಲೆ ಅಥವ ಕಾರ್ಯಕ್ಷೇತ್ರದಲ್ಲಿನ ಚಟುವಟಿಕೆಗಳಿಗೆ ಅಡ್ಡಿ ಉಂಟುಮಾಡುವುದಲ್ಲದೆವ್ಯಕ್ತಿ  ದಯನೀಯವಾಗಿ ಕಾಣುವಂತೆ ಮಾಡುತ್ತದೆ.

   

            ಸತತವಾಗಿ ಸೀನುವ ಮತ್ತು ಸುರಿಯುವ ಮೂಗಿನ ಬಗೆಗೇ ಲಕ್ಷ್ಯವುಳ್ಳ ವ್ಯಕ್ತಿ ಹೇಗೆ ತಾನೆ ಸಹಜ ಚಟುವಟಿಕೆಯಿಂದ ಕೂಡಿದ ಜೀವನವನ್ನು ನಡೆಸಲು ಸಾಧ್ಯ? ಅಲರ್ಜಿಕ್ ರಿನಿಟಿಸ್ ನ್ನು ಎದುರಿಸಲು ಇರುವ ಅತ್ಯುತ್ತಮ ಪರಿಹಾರವೆಂದರೆ ವೈದ್ಯರೊಡನೆ ಸಮಾಲೋಚನೆ ಮಾಡುವುದು. ಅವರು ರೋಗಿಯ ಸ್ಥಿತಿಯನ್ನು ಅಧ್ಯಯನ ಮಾಡಿ ಸೂಕ್ತ ಚಿಕಿತ್ಸೆಗೆ ಒಳಪಡಿಸುವರು.

   

            ಸಾಮಾನ್ಯವಾಗಿ ಅಲರ್ಜಿಕ್ ರಿಟಿನಿಸ್ ನ್ನು ಗುಣಪಡಿಸಲು ಆಂತರಿಕ ಕಾರ್ಟಿಕೋಸ್ಟೆರಾಯ್ಡ್ಸ್ ಉಳ್ಳ  ನೇಸಲ್ ಸ್ಪ್ರೇಯನ್ನು ನೀಡುವರು. ಔಷಧಿಗಳು ಖಾಯಿಲೆಯ ಮೂಲವನ್ನು ಗುಣಪಡಿಸಿ ನಿರಾಳತೆಯನ್ನು ಉಂಟುಮಾಡುವುದು. ಅದನ್ನು ನೇಸಲ್ ಸ್ಪ್ರೇ  ರೂಪದಲ್ಲೇ  ತೆಗೆದುಕೊಳ್ಳಬೇಕು. ಆಗ  ಔಷಧಿ ಸಮಸ್ಯೆಯ ಮೂಲಕ್ಕೇ ಅಂದರೆ ಮೂಗಿನ  ಒಳಭಾಗಕ್ಕೆ  ತಲಪುತ್ತದೆ.

   

    ವೈದ್ಯಕೀಯ ವೃತ್ತಿಯಲ್ಲಿ ಅಲರ್ಜಿಕ್ ರಿಟಿನಿಸ್ ಅತ್ಯಂತ ಸಾಮಾನ್ಯವಾಗಿ ಕಂಡುಬರುವಂತಹದ್ದು. ಆದರೆ ಅದು ಎಷ್ಟು ಸಾಮಾನ್ಯವೋ ಅದನ್ನು ಸರಿಯಾಗಿ ಗುರುತಿಸದ, ಗುಣಪಡಿಸದ ಮತ್ತು ಕೀಳಂದಾಜು ಮಾಡುವುದೂ ಅಷ್ಟೇ ಸಾಮಾನ್ಯ. ಹೆಚ್ಚಿನ ಸಂದರ್ಭಗಳಲ್ಲಿ ಅದನ್ನೊಂದು ಕ್ಷುಲ್ಲಕ ಖಾಯಿಲೆಯಾಗಿ ಪರಿಗಣಿಸಲಾಗುತ್ತದೆ. ಆದರೆ ಸತತ ಸೀನುವ, ಉಸಿರು ಕಟ್ಟುವ, ದ್ರವಿಸುವ ಕಣ್ಣುಗಳ ಯಾತನೆ ರೋಗಿಗೆ ಗಣನೀಯ ತೊಂದರೆಯನ್ನು ನೀಡುತ್ತದೆ  ಎಂದು ವೈದ್ಯರಾದ ಡಾ. ನಾರಾಯಣ ಪ್ರದೀಪ್ ಒತ್ತಿ ಹೇಳುತ್ತಾರೆ.

   

            ಸಾಮಾನ್ಯವಾಗಿ ವಾತಾವರಣದಲ್ಲಿನ ಬದಲಾವಣೆ ಅಲರ್ಜಿಕ್ ರೋಗ ಲಕ್ಷಣಗಳನ್ನು ಹೆಚ್ಚಿಸಿ ಕೆರೆತ, ಮೂಗು ಕೆಂಪಾಗುವುದು, ತಲೆ ನೋವು, ಕಿರಿಕಿರಿ ಮುಂತಾದವುಗಳಿಗೆ ಕಾರಣವಾಗುವುದನ್ನು ಕಾಣುತ್ತೇವೆ. ಲಕ್ಷಣಗಳು ಮುಂದುವರಿದು ಅಸ್ತಮ ಅಥವ ಅಲರ್ಜಿಕ್ ರಿಟಿನಿಸ್ ಗೆ ತಿರುಗಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಇತರ ಕಾಯಿಲೆಗಳ ಹಾಗೆ ಇದನ್ನು ಗಂಭೀರವಾಗಿ ಪರಿಗಣಿಸದೆ ಉಪೇಕ್ಷಿಸಲಾಗುತ್ತದೆ. ಕೆಮ್ಮಿನ ಸಿರಪ್ ಮೇಲೆ ಅವಲಂಬಿತರಾದಾಗ ಅದು ಚಿಕಿತ್ಸೆಯನ್ನು ಮತ್ತೂ ತಡವಾಗಿಸಿ ಸ್ಥಿತಿಯನ್ನು ಇನ್ನಷ್ಟು ಗಂಭೀರವಾಗಿಸುತ್ತದೆ.

   

    ಅಸ್ತಮ ಹಾಗೂ ಅಲರ್ಜಿಕ್ ರಿಟಿನಿಸ್  ಬಹುಪಾಲು ಒಂದೇ ಎನಿಸಬಹುದು ಆದರೆ ಅದಲ್ಲ.       ಭಾರತೀಯ ಜನಸಂಖ್ಯೆಯ ಶೇಕಡ ಇಪ್ಪತ್ತರಿಂದ ಮುವ್ವತ್ತರಷ್ಟು ಮಂದಿ ಅಲರ್ಜಿಕ್ ರಿನಿಟಿಸ್ ನಿಂದ ಮತ್ತು ಶೇಕಡ ಹದಿನೈದರಷ್ಟು ಮಂದಿ ಅಸ್ತಮದಿಂದ  ಬಳಲುತ್ತಿದ್ದಾರೆ. ಜಗತ್ತಿನ ಅತಿ ಹೆಚ್ಚು ಅಲರ್ಜಿಕ್ ರಿಟಿನಿಸ್ ಬಾಧಿತ ಹತ್ತು ದೇಶಗಳ ಪಟ್ಟಿಯಲ್ಲಿ ಭಾರತ ಬರುತ್ತದೆ. ಜಗತ್ತಿನಾದ್ಯಂತ  ಐನೂರು ದಶಲಕ್ಷ ಜನ ಇದರಿಂದ ಬಾಧಿತರಾಗಿದ್ದಾರೆ. ಶೇಕಡ ಎಂಬತ್ತರಷ್ಟು ಸಂದರ್ಭಗಳಲ್ಲಿ ಇದು ಇಪ್ಪತ್ತನೆಯ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ. ಸುಮಾರು ಆರರಲ್ಲಿ ಒಬ್ಬರು ಇದರಿಂದ ಬಾಧಿತರೆಂದು ಸುಲುಭವಾಗಿ ಹೇಳಬಹುದು.

   

    ಅಲರ್ಜಿಕ್ ರಿಟಿನಿಸ್ ಮಾರಣಾಂತಿಕ ಅಲ್ಲದಿದ್ದರೂ ಅದು ಜೀವನವನ್ನು ಅಸ್ತವ್ಯಸ್ತಗೊಳಿಸಬಹುದು.

  ನಿದ್ರಾಭಂಗ, ಶಾಲೆ ಅಥವ ಕಾರ್ಯಕ್ಷೇತ್ರದಲ್ಲಿನ ಚಟುವಟಿಕೆಗಳಿಗೆ ಅಡ್ಡಿ ಉಂಟುಮಾಡುವುದಲ್ಲದೆ ದಯನೀಯವಾಗಿ ಕಾಣುವಂತೆ ಮಾಡುತ್ತದೆ. ಪ್ರತಿನಿತ್ಯದ ಕಾರ್ಯಗಳನ್ನು ಸತತ ಸೀನುತ್ತಾ ಏದುಸಿರು ಬಿಡುತ್ತಾ ಮಾಡುವುದನ್ನು ಊಹಿಸಿ!. ಇದೊಂದು ಸವಾಲಲ್ಲವೇಆದರೆ ಆಧುನಿಕ ಔಷಧಿಗಳಿಂದ ಇದನ್ನು ನಿಯಂತ್ರಿಸಬಹುದು. ಔಷಧಿಯನ್ನು  ನೇರವಾಗಿ ಸಮಸ್ಯೆಯ ತಾಣಕ್ಕೆ ಅಂದರೆ ಮೂಗಿನ ಒಳಭಾಗಕ್ಕೆ ಮುಟ್ಟಿಸಬಲ್ಲ ನೇಸಲ್ ಸ್ಪ್ರೇಯಂತಹ ಸುಲುಭ ಚಿಕಿತ್ಸಾ ವಿಧಾನಗಳಿದ್ದರೂ ಅವುಗಳನ್ನು ಉಪೇಕ್ಷಿಸಲಾಗುತ್ತಿದೆ.

   

  ವೈದ್ಯಕೀಯ ವೃತ್ತಿಯಲ್ಲಿ ಅಲರ್ಜಿಕ್ ರಿಟಿನಿಸ್ ಅತ್ಯಂತ ಸಾಮಾನ್ಯವಾಗಿ ಕಂಡುಬರುವಂತಹದ್ದು. ಆದರೆ ಅದು ಎಷ್ಟು ಸಾಮಾನ್ಯವೋ ಅದನ್ನು ಸರಿಯಾಗಿ ಗುರುತಿಸದ, ಗುಣಪಡಿಸದ ಮತ್ತು ಕೀಳಂದಾಜು ಮಾಡುವುದೂ ಅಷ್ಟೇ ಸಾಮಾನ್ಯ. ಹೆಚ್ಚಿನ ಸಂದರ್ಭಗಳಲ್ಲಿ ಅದನ್ನೊಂದು ಕ್ಷುಲ್ಲಕ ಖಾಯಿಲೆಯಾಗಿ ಪರಿಗಣಿಸಲಾಗುತ್ತದೆ. ಆದರೆ ಸತತ ಸೀನುವ, ಉಸಿರು ಕಟ್ಟುವ, ದ್ರವಿಸುವ ಕಣ್ಣುಗಳ ಯಾತನೆ ರೋಗಿಗೆ ಗಣನೀಯ ತೊಂದರೆಯನ್ನು ನೀಡುತ್ತದೆ .   ಅಲರ್ಜಿಕ್ ರಿಟಿನಿಸ್ ಗೆ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಕಾಯಿಲೆ ಇನ್ನಷ್ಟು ತೀವ್ರವಾಗಿ ಸೈನುಸಿತೀಸ್, ಒಟಟೀಸ್ ಮೀಡಿಯ ಮುಂತಾದ ತೀವ್ರ ಅಪಾಯಕಾರಿಯಾದ ಸಂಯೋಜಿತ ಕಾಯಿಲೆಗಳಿಗೆ ಅವಕಾಶವಾಗಬಹುದು.

   

    ಸಾಧಾರಣ ಆದರೆ ಕಿರಿಕಿರಿದಾಯಕವಾದ ರೋಗದ ಬಗೆಗೆ ಜಾಗೃತಿಯನ್ನು ಮೂಡಿಸಲು ಇದು ಸಕಾಲಇದು ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುವಂತಹದ್ದಾದುದರಿಂದ ಸಾಮಾನ್ಯ ರೋಗ ಲಕ್ಷಣಗಳಾದ ಮೂಗು ಸೋರುವುದು, ಆಗಾಗ ಸೀನುವುದು ಮುಂತಾದುವುಗಳನ್ನು ಉಪೇಕ್ಷಿಸದಂತೆ ಜಾಗೃತಿ ಮೂಡಿಸಬೇಕು. ರೋಗವನ್ನು ಉಲ್ಬಣಗೊಳಿಸುವ  ಅಂಶಗಳು ಮತ್ತು ಚಿಕಿತ್ಸೆ ನೀಡದಿದ್ದರೆ ಆಗುವ ದುಷ್ಪರಿಣಾಮಗಳ ಬಗ್ಗೆಯೂ ಅರಿವು ಮೂಡಿಸಬೇಕು.

   

  Dr. Narayana Pradeepa P

  MBBS, DTCD    

  Consultant Pulmonologist